Follow Us!

ಕೌಶಲ್ಯ ಅಭಿವೃದ್ಧಿಯಿಂದ ಉದ್ಯೋಗದ ತನಕ

ಶುಲ್ಕರಹಿತವಾಗಿ ಅಪ್ಲೈ ಮಾಡಿ ಸದಸ್ಯರಾಗಿ

ಅರ್ಜಿದಾರರು / ಉದ್ಯೋಗದಾತರಿಗೆ ಪ್ರಮುಖ ಮಾಹಿತಿ:

ಈ ವೆಬ್-ಸೈಟ್ ಯಾವುದೇ ರೀತಿಯ ಉದ್ಯೋಗ ಅವಕಾಶಕ್ಕಾಗಿ ಅರ್ಜಿದಾರರಿಂದ ಯಾವುದೇ ರೀತಿಯ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ, ಮತ್ತು ಯಾವುದೇ ವ್ಯಕ್ತಿಯು ಯಾವುದೇ ರೀತಿಯ ಶುಲ್ಕವನ್ನು ತೆಗೆದುಕೊಳ್ಳಲು ಅಧಿಕಾರವನ್ನು ಹೊಂದಿಲ್ಲ

ಪ್ರಧಾನ ಮಂತ್ರಿ ಶ್ರೀ. ಮೋದಿಯವರ ಡಿಜಿಟಲ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ದೃಷ್ಟಿಕೋನಕ್ಕನುಸಾರ, IFFCOYuva ಗ್ರಾಮೀಣ ಯುವಜನರಿಗೆ ತಮ್ಮ ಉದ್ಯೋಗ ಸಾಮರ್ಥ್ಯವನ್ನು ವರ್ಧಿಸಲು ಸಹಾಯ ಮಾಡುವುದು

ಡಾ. ಯು.ಎಸ್.ಅವಸ್ತಿ, MD ಇಫ್ಕೊ

How Does it work for you?

ವರ್ಗಗಳನ್ನು ಆಯ್ಕೆಮಾಡಿ

ವಿಶಿಷ್ಟ ಕೆಲಸಗಳನ್ನು ನೋಡಿ

ಪ್ರಮುಖ ಕಂಪೆನಿಗಳಲ್ಲಿ ಉದ್ಯೋಗಗಳು

 • img
  Junior Accountant Delhi

  BHARTI ENTERPRISES

  Exp (Years): Fresher
  Salary (₹): 200,000-300,000
  Last Date: 31 Oct 19
 • img
  LEGAL EXECUTIVE Delhi

  ERA TRADERS

  Exp (Years): Fresher
  Salary (₹): 300,000-500,000
  Last Date: 31 Oct 19
 • img
  Construction managers Delhi

  ERA TRADERS

  Exp (Years): Fresher
  Salary (₹): 200,000-400,000
  Last Date: 31 Oct 19
 • img
  SENIOR MANAGER Delhi

  BHARTI ENTERPRISES

  Exp (Years): Fresher
  Salary (₹): 500,000-800,000
  Last Date: 31 Oct 19

ಪ್ರಮುಖ ನಗರಗಳಲ್ಲಿ ಉದ್ಯೋಗಗಳು

Bhagalpur

1 Open Positions

Faizabad

1 Open Positions

Gonda

2 Open Positions

Kanpur

1 Open Positions

Lucknow

5 Open Positions

Noida

17 Open Positions

Delhi

172 Open Positions

Ghaziabad

28 Open Positions

Gurgaon

16 Open Positions

Kaushambi

1 Open Positions

Meerut

1 Open Positions

ಪ್ರಧಾನ ಕಂಪೆನಿಗಳಲ್ಲಿ ಉದ್ಯೋಗಗಳು

Success Stories

ಉದ್ಯೋಗಕ್ಕಾಗಿ ಸಿದ್ಧರಾಗಿರಿ

+2 ಬಳಿಕ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು...

ಕೈಗಾರಿಕಾ ತರಬೇತಿ ಸಂಸ್ಥೆಗಳು ಅಥವಾ ಐಟಿಐ ಗಳನ್ನು ಭಾರತ ಸರ್ಕಾರವು ನಿರ್ಮಿಸಿದ್ದು, ಇವುಗಳು ಕೇಂದ್ರ ಕಾರ್ಮಿಕ ಸಚಿವಾಲಯದ ವ್ಯಾಪ್ತಿಗೆ ಬರುತ್ತವೆ. ಐಟಿಐ ನಲ್ಲಿ ಪದವಿ ಪಡೆಯುವುದು ಕಡಿಮೆ ವೆಚ್ಚದಾಯಕ ಆಗಿರುವ ಕಾರಣ, ಭಾರತೀಯ ಜನಸಂಖ್ಯೆಯ ಅತಿದೊಡ್ಡ ಭಾಗಕ್ಕೆ ಇದೊಂದು ಸೂಕ್ತ ಆಯ್ಕೆಯಾಗಿರುತ್ತದೆ. ಈ ಪದವಿಗೆ ಅಗತ್ಯವಿರುವ ಕನಿಷ್ಠ ಶೈಕ್ಷಣಿಕ ಅರ್ಹತೆಯೂ ಹೆಚ್ಚೇನಿಲ್ಲ. ಯಾರಿಗೆ ತಾಂತ್ರಿಕ ಜ್ಞಾನವನ್ನು ಗಳಿಸಲು ಆಸಕ್ತಿಯಿದೆಯೋ, ಅಂಥವರು ಸುಲಭವಾಗಿ ಈ ಸಂಸ್ಥೆಗಳಿಗೆ ಸೇರ್ಪಡೆಯಾಗಬಹುದು.

+2 ಪೂರ್ಣಗೊಳಿಸಿದ ಬಳಿಕ ಅರ್ಜಿ ಸಲ್ಲಿಸಬಹುದಾದ...

ಉತ್ತಮ ಭವಿಷ್ಯ ನಿರ್ಮಾಣಕ್ಕೆ ಉನ್ನತ ಶಿಕ್ಷಣ ಅಗತ್ಯ ಎಂಬ ಮಾತು ಜನಪ್ರಿಯಗೊಂಡಿದ್ದರೂ, ಭಾರತದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಅತ್ಯಗತ್ಯ ಎಂದೇನಿಲ್ಲ. ಹೈಸ್ಕೂಲು ಪೂರ್ಣಗೊಳಿಸಿದ ಜನರು ಕೂಡ ದೇಶದೊಳಗೇ ಇದ್ದುಕೊಂಡು ಉತ್ತಮ ವೇತನ ಗಳಿಸುವಂಥ ಅನೇಕ ಆಯ್ಕೆಗಳು ನಮ್ಮ ಮುಂದಿವೆ.

ನೀವು ಓದಿದ್ದು ಸರಿಯಾಗಿಯೇ ಇದೆ. ಕಾಲೇಜು ಪದವಿ ಇಲ್ಲ ಎಂದಾಕ್ಷಣ ನಿಮ್ಮ ಭವಿಷ್ಯವೇ ಮುಗಿಯಿತು ಎಂದು ಅರ್ಥವಲ್ಲ. ಪದವಿ ಇಲ್ಲದಿದ್ದರೂ, ನಿರ್ದಿಷ್ಟ ಪಾತ್ರಕ್ಕೆ ಅನುಗುಣವಾಗಿ ನೀವು ಕೂಡ ಶಿಸ್ತುಬದ್ಧವಾದ ವೇತನವಿರುವ ಉದ್ಯೋಗ ಪಡೆಯಬಹುದು.

ಪದವಿಯ ಬಳಿಕ ಸ್ಟಾರ್ಟಪ್ ನಲ್ಲಿ ಕೆಲಸ...

ಸ್ಟಾರ್ಟಪ್ ನಿಂದಾಗಿ ಉತ್ತಮ ಆದಾಯ ಗಳಿಸಿಕೊಳ್ಳಬಹುದು ಎಂಬ ಸಾಮಾನ್ಯ ಕಲ್ಪನೆ ಕೆಲವರಿಗಿದೆ. ಆದರೆ, ಸ್ಟಾರ್ಟಪ್ ನಲ್ಲಿ ಕೆಲಸ ಮಾಡುವುದರಿಂದ ಅದಕ್ಕಿಂತಲೂ ಹೆಚ್ಚಿನದನ್ನೇ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ, ಅನೇಕ ಪದವೀಧರರು ಸ್ಟಾರ್ಟಪ್ ಉದ್ಯೋಗಗಳಿಗೆ ಸೇರುತ್ತಿದ್ದಾರೆ. ಆದರೆ, ಆದಾಯ ಗಳಿಸುವ ಉದ್ದೇಶಕ್ಕಲ್ಲ, ಬದಲಿಗೆ ತಮ್ಮ ಕಲಿಕೆಯ ಆಯ್ಕೆಗಳನ್ನು ಗರಿಷ್ಠಗೊಳಿಸುವ ಉದ್ದೇಶದಿಂದ.

ನೀವು ಪದವಿಯನ್ನು ಪೂರ್ಣಗೊಳಿಸಿದ್ದು, ಸ್ಟಾರ್ಟಪ್ ಹೊಸ ಕಂಪನಿ ಆಯ್ದುಕೊಳ್ಳಬೇಕೋ, ಬೇಡವೋ ಎಂಬ ಬಗ್ಗೆ ಗೊಂದಲ ಹೊಂದಿದ್ದರೆ, ನೀವು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳು ಇಲ್ಲಿವೆ:

ಪೈಪ್ ಫಿಟ್ಟರ್ ವರ್ಸಸ್ ವೆಲ್ಡರ್ –...

ಕೌಶಲ್ಯಭರಿತ ಉದ್ಯೋಗವನ್ನೇ ಕಲಿಯಬೇಕು ಎಂದು ನೀವು ನಿರ್ಧರಿಸಿದರೆ, ಅಂಥ ಸಾಕಷ್ಟು ಉದ್ಯೋಗಗಳ ಪೈಕಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಪೈಪ್ ಫಿಟ್ಟರ್ ಗಳು ಮತ್ತು ವೆಲ್ಡರ್ ಗಳು ಕೂಡ ಇಂಥ ಅಧಿಕ ಪಾವತಿಯ ಕೌಶಲ್ಯಭರಿತ ಉದ್ಯೋಗಗಳಲ್ಲಿ ಸೇರುತ್ತಾರೆ. ವಾಣಿಜ್ಯ ಮತ್ತು ವಸತಿಯಿಂದ ಹಿಡಿದು ಉತ್ಪಾದನಾ ಸ್ಥಾವರಗಳು ಹಾಗೂ ತೈಲ ಶುದ್ಧೀಕರಣ ಘಟಕಗಳವರೆಗೆ ಅನೇಕಾನೇಕ ಉದ್ದಿಮೆಗಳಲ್ಲಿ ಈ ಕ್ಷೇತ್ರದ ಪರಿಣಿತರ ಅಗತ್ಯವಿರುತ್ತದೆ. ಆದರೆ, ಇವೆರಡರ ನೈಜ ಕೆಲಸಗಳೇನು? ನೋಡೋಣ ಬನ್ನಿ.

ಕಂಪನಿಗಳು ತಮ್ಮ ಎಚ್ಆರ್ ಅಭ್ಯರ್ಥಿಗಳಲ್ಲಿ ಹುಡುಕುವಂಥ...

ಯಾವಾಗ ನೀವು ಎಚ್ಆರ್ ಅಂದರೆ ಮಾನವ ಸಂಪನ್ಮೂಲ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರೋ, ಆಗ ನೀವು ಮೇಜಿನ ಮತ್ತೊಂದು ಬದಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಅಂದರೆ, ಸಂದರ್ಶನ ನೀಡುವುದರ ಬದಲಿಗೆ ಸಂದರ್ಶನ ಪಡೆಯುವವರಾಗಿ ಮಾರ್ಪಾಡಾಗಬೇಕಾಗುತ್ತದೆ.

ಏಕೆಂದರೆ, ಒಬ್ಬ ಎಚ್ಆರ್ ಎಕ್ಸಿಕ್ಯೂಟಿವ್ ನ ಉದ್ಯೋಗದಲ್ಲಿ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಮತ್ತು ನಿರ್ದಿಷ್ಟ ಕಂಪನಿಯ ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವ ಕೆಲಸವು ಒಳಗೊಂಡಿರುತ್ತದೆ. ಈ ಉದ್ಯೋಗವು ದುರ್ಬಲ ಹೃದಯದವರಿಗೆ ಆಗಿಬರುವುದಿಲ್ಲ. ನೀವು ಮುಂಬೈ, ನೋಯ್ಡಾ ಅಥವಾ ನಿಮ್ಮ ಆದ್ಯತೆಯ ನಗರದಲ್ಲಿ ಎಚ್ಆರ್ ಎಕ್ಸಿಕ್ಯೂಟಿವ್ ಅಥವಾ ಫ್ರೆಷರ್ ಉದ್ಯೋಗವನ್ನು ಹುಡುಕುತ್ತಿದ್ದೀರಿ ಎಂದಾದರೆ, ನೀವು ಮೊದಲು ಎಚ್ಆರ್ ಅಭ್ಯರ್ಥಿಗಳಲ್ಲಿ ಯಾವ್ಯಾವ ಕೌಶಲ್ಯಗಳನ್ನು ಕಂಪನಿಗಳು ಬಯಸುತ್ತವೆ ಎಂಬುದನ್ನು ತಿಳಿದುಕೊಳ್ಳಲೇಬೇಕಾಗುತ್ತದೆ:

ನಿಮಗೆ ಗೊತ್ತಿರಬೇಕಾದ ಐದು ಐಟಿಐ ಉದ್ಯೋಗಗಳು...

ಐಟಿಐ(ಕೈಗಾರಿಕಾ ತರಬೇತಿ ಸಂಸ್ಥೆ) ಉದ್ಯೋಗಗಳು ಶಾಲಾ ಶಿಕ್ಷಣ ಮುಗಿಸಿದವರಿಗೆಂದೇ ಇರುವಂಥದ್ದು. 10 ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ 100ಕ್ಕೂ ಹೆಚ್ಚು ಕೋರ್ಸ್ ಗಳು ಲಭ್ಯವಿದೆ. ಐಟಿಐ ಕೋರ್ಸ್ ಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವೆಂದರೆ:

 1. ಒಂದು ವರ್ಷದ ಐಟಿಐ ಕೋರ್ಸ್ ಗಳು
 2. ಎರಡು ವರ್ಷದ ಐಟಿಐ ಕೋರ್ಸ್ ಗಳು

ಕೋರ್ಸ್ ನ ಅವಧಿಯು ಐಟಿಐ ಉದ್ಯೋಗದ ಮೇಲೆ ಅವಲಂಬಿತವಾಗಿರುತ್ತವೆ. ನೀವು ಐಟಿಐ ಕೋರ್ಸ್ ವೊಂದಕ್ಕೆ ಸೇರಬಯಸುವುದಾದರೆ, ನಿಮಗೆ ಗೊತ್ತಿರಬೇಕಾದ 5 ಐಟಿಐ ಉದ್ಯೋಗಗಳು ಇಂತಿವೆ:

ಭಾರತದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗಗಳಿಗೆ ಬೇಕಾಗುವ...

ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂದರೆ, ನೀವು ವಿವಿಧ ಕ್ಷೇತ್ರಗಳಲ್ಲಿ ಪರಿಣತರಾಗಿ ಹಲವು ಕೆಲಸಗಳನ್ನು ಮಾಡಬೇಕಾಗಿರುತ್ತದೆ. ನೀವು ಕೆಲಸ ಮಾಡುತ್ತಿರುವಂಥ ವಿವಿಧ ಡಿಜಿಟಲ್ ಮಾರ್ಕೆಟಿಂಗ್ ಅಭಿಯಾನಗಳಿಗೆ ಕ್ರಿಯಾಶೀಲತೆಯನ್ನು ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮಹತ್ವವನ್ನು ನೀವು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ನೀವು ಮುಂಬೈ, ಗುರುಗಾಂವ್ ಅಥವಾ ನೋಯ್ಡಾದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗ ಮಾಡಬೇಕೆಂದು ಬಯಸಿದ್ದಲ್ಲಿ ಅಥವಾ ಇನ್ನೂ ಒಂದು ಮೆಟ್ಟಿಲು ಮುಂದೆ ಹೋಗಿ, ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಕೆಲಸಕ್ಕೆ ಸೇರಬೇಕೆಂದು ಬಯಸಿದ್ದಲ್ಲಿ, ನೀವು ಈ ಕೆಳಗಿನ ಕೌಶಲ್ಯಗಳನ್ನು ಹೊಂದಿರಬೇಕಾಗುತ್ತದೆ:

ಸಂದರ್ಶನದ ವೇಳೆ ಏನನ್ನು ಧರಿಸಬೇಕು? ...

ಸಂದರ್ಶನದ ವೇಳೆ ಯಾವ ರೀತಿಯ ಉಡುಗೆಗಳನ್ನು ಧರಿಸಬೇಕು ಎಂಬ ಅನುಮಾನವು ಉದ್ಯೋಗ ಬೇಟೆ ಪ್ರಕ್ರಿಯೆಯಲ್ಲಿ ಮೂಡುತ್ತದೆ. ಸಂದರ್ಶನದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಎಷ್ಟು ಚೆನ್ನಾಗಿ ನೀವು ಉತ್ತರಿಸುತ್ತೀರಿ ಎನ್ನುವುದು ಮಾತ್ರವಲ್ಲದೆ, ನಿಮ್ಮನ್ನು ನೀವು ಹೇಗೆ ತೋರಿಸಿಕೊಳ್ಳುತ್ತೀರಿ ಎಂಬುದರ ಮೇಲೂ ಯಶಸ್ವಿ ಸಂದರ್ಶನ ಅವಲಂಬಿಸಿರುತ್ತದೆ. ಹೀಗಾಗಿಯೇ ಸ್ಮಾರ್ಟ್ ಆಗಿರುವ ಹಾಗೂ ಪರಿಪೂರ್ಣವಾದ ತೋರ್ಪಡಿಕೆಯು ಎಷ್ಟು ಮುಖ್ಯವೆಂದರೆ, ನೀವು ಆ ಕಂಪನಿಗೆ ಸೂಕ್ತವಾದ ವ್ಯಕ್ತಿ ಎಂಬ ಭಾವನೆಯು ಉದ್ಯೋಗಕ್ಕೆ ಸೇರ್ಪಡೆಗೊಳಿಸುತ್ತಿರುವ ಮ್ಯಾನೇಜರ್ ನ ಮನದಲ್ಲಿ ಮೂಡಲು ಇದು ಸಹಾಯಕವಾಗುತ್ತದೆ.

ಸಂದರ್ಶನದ ವೇಳೆ ಏನನ್ನು ಧರಿಸುವುದು ಎಂಬ ಯೋಚನೆಯಲ್ಲಿರುವಾಗ ನೀವು ಅನುಸರಿಸಬಹುದಾದ ಕೆಲವು ಸಲಹೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ: 

ನಿಮ್ಮ ವೃತ್ತಿಜೀವನವನ್ನು ಬಹಳ ಎತ್ತರಕ್ಕೆ ಮುಟ್ಟಿಸಬಹುದಾದ...

ಮಾರುಕಟ್ಟೆಯು ತುಂಬ ವ್ಯಾಪಕವಾಗಿ ವೈವಿಧ್ಯಮಯವಾಗಿರುವುದು ಮಾತ್ರವಲ್ಲ ನಿರಂತರವಾಗಿ ಬದಲಾಗುತ್ತಿರುವಂಥ ಸಮಯಗಳಲ್ಲಿ ನಾವು ಜೀವಿಸುತ್ತಿದ್ದೇವೆ. ಆದುದರಿಂದ, ಕೇವಲ ಜೀವನವನ್ನು ಮುಂದುವರಿಸಲು ಮಾತ್ರವೇ ಅಲ್ಲ ಬದಲಾಗಿ ಈ ಕ್ರಿಯಾತ್ಮಕ ಹಾಗೂ ಬದಲಾಗುತ್ತಿರುವ ಕೆಲಸದ ಪರಿಸರದಲ್ಲಿ ಎತ್ತರಕ್ಕೆ ಬೆಳೆಯಲು ಬಯಸುವ ಯಾರೇ ಆಗಲಿ ಅವರು ಹೊಂದಾಣಿಕೆ ಮತ್ತು ಪ್ರಯೋಜನವಾದಿ ದೃಷ್ಟಿಕೋನಗಳಂಥ ಪ್ರಮುಖ ಗುಣಗಳನ್ನು ಹೊಂದಿರಬೇಕು.

ಒಬ್ಬ ಫ್ರೆಷರ್ ಆಗಿ ನೀವು ಒಂದು...

ಆದರೂ ಮುಂಬೈ ಮತ್ತು ಇತರ ಮಹಾನಗರಗಳಲ್ಲಿ ಉದ್ಯೋಗವನ್ನು ಪಡೆಯುವುದು ಮತ್ತು ತಮಗೋಸ್ಕರ ಒಳ್ಳೇ ಉದ್ಯೋಗವನ್ನು ಹೇಗೆ ಹುಡುಕುವುದು ಎಂಬುದು ಹೊಸ ಪದವೀಧರರ ಮತ್ತು ಫ್ರೆಷರ್ಸ್ ರಿಗೆ ಮುಖ್ಯವಾದ ಚಿಂತೆಗಳಲ್ಲಿ ಒಂದಾಗಿರುತ್ತದೆ. ಮೊದಲನೆಯದಾಗಿ ಫ್ರೆಷರ್ಸ್ ಗಳು ತಮ್ಮನ್ನು ಇತರರಿಗಿಂತ ಭಿನ್ನರಾಗಿ ತೋರಿಸಿಕೊಳ್ಳಲು, ಸರಿಯಾದ ನಿರ್ಣಯಗಳನ್ನು ಮಾಡಲು ಮತ್ತು ಸೂಕ್ತವಾದ ಉದ್ಯೋಗವನ್ನು ಕಂಡುಕೊಳ್ಳುವ ತನಕ ವಿವಿಧ ಲಿಸ್ಟಿಂಗ್ನಲ್ಲಿ ಉದ್ಯೋಗಗಳಿಗಾಗಿ ಅರ್ಜಿ ಸಲ್ಲಿಸಲು ಸಿದ್ಧರಾಗಿರಬೇಕು.

ಶೀರ್ಷಿಕೆ:- ಉತ್ತಮ ವೃತ್ತಿಜೀವನದ ಬೆಳವಣಿಗೆಗಾಗಿ ಸಲಹೆಗಳು...

ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಸ್ವತಃ ನೀವೇ ಜವಾಬ್ದಾರರು. ಯಾರ ವೃತ್ತಿಜೀವನಗಳು ತ್ವರಿತಗತಿಯಲ್ಲಿ ಸಾಗುತ್ತವೋ ಅಂಥ ಜನರಿಗೆ ಗೊತ್ತಿದೆ ಏನೆಂದರೆ ಕಾರ್ಯಕ್ಷೇತ್ರದಲ್ಲಿ ಸ್ಪರ್ಧೆಯು ಯಾವಾಗಲೂ ಇರುತ್ತದೆ, ಮತ್ತು ಯಶಸ್ವಿಯಾಗಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ತಮ್ಮ ವೃತ್ತಿಜೀವನದ ಬೆಳವಣಿಗೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ವೃತ್ತಿಜೀವನವು ಎಲ್ಲಿ ಬೆಳೆಯಬೇಕೆಂದು ನೀವು ಬಯಸುತ್ತೀರೋ ಅಂಥ ಸನ್ನಿವೇಶಗಳಲ್ಲಿ, ನೀವು ಹೆಚ್ಚನ್ನು ಕಲಿಯಲು ಮತ್ತು ನಿಮ್ಮ ಪರಿಣಿತಿಯನ್ನು ಅನ್ವಯಿಸಲು ಸಾಧ್ಯವಿರುವಂಥ ಒಂದು ಉದ್ಯೋಗಕ್ಕಾಗಿ ನೀವು ಯಾವಾಗಲೂ ಹುಡುಕಬಹುದು.

ಶೀರ್ಷಿಕೆ:- ಭಾರತೀಯ ಉದ್ಯೋಗ ಮಾರುಕಟ್ಟೆಯಲ್ಲಿ ಯಾವ...

ಹಳೆಯ ಕಾಲಕ್ಕೆ ವ್ಯತಿರಿಕ್ತವಾಗಿ ವಿದ್ಯಾರ್ಥಿಗಳು ಇಂದು ದೂರದೃಷ್ಟಿಯುಳ್ಳವರಾಗಿದ್ದಾರೆ ಮತ್ತು ವಿವೇಚನಾಶಕ್ತಿಯುಳ್ಳವರಾಗಿದ್ದಾರೆ, ವಿಶೇಷವಾಗಿ ತಾವು ಅನುಸರಿಸಲು ಬಯಸುವ ವೃತ್ತಿಜೀವನವನ್ನು ಆಯ್ಕೆಮಾಡುವ ವಿಷಯದಲ್ಲಿ.  ಪ್ರಸ್ತುತ ಸನ್ನಿವೇಶದಲ್ಲಿ,  ಬೇಕಾದಷ್ಟು ಸಂಖ್ಯೆಯಲ್ಲಿ ವೃತ್ತಿಜೀವನದ ಆಯ್ಕೆಗಳು ಲಭ್ಯ ಇರುವುದರಿಂದ, ಮೇಲೆ ತಿಳಿಸಲಾಗಿರುವ ಗುಣಗಳು ವಿದ್ಯಾರ್ಥಿಗಳಲ್ಲಿರುವುದು ಅವರು ಗೊಂದಲಕ್ಕೊಳಗಾಗದಂತೆ ತಡೆಯಲು ಅತ್ಯಧಿಕ ಮಟ್ಟಿಗೆ ಸಹಾಯಮಾಡಬಲ್ಲದು.

ಉದ್ಯೋಗದಾತರು ಕೆಲಸಗಾರರಲ್ಲಿ ಯಾವ ಕೌಶಲಗಳನ್ನು ೂಂರೕಕು?...

ಹೆಚ್ಚುಕಡಿಮೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನದ ಏಕೀಕರಣದಿಂದಾಗಿ, ಆನ್-ಲೈನ್ ಉದ್ಯೋಗದ ಅರ್ಜಿಗಳನ್ನು ಕಂಡುಕೊಳ್ಳುವುದು ಕಷ್ಟಕರ ಸಂಗತಿಯೇನಲ್ಲ. ನೀವು ಸರಿಯಾದ ನಿಯತಾಂಕಗಳ ಸಹಾಯದಿಂದ ಹುಡುಕಬೇಕಾಗಿದೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಲಭ್ಯವಿರುವ ಉದ್ಯೋಗಗಳ ದೊಡ್ಡ ಪಟ್ಟಿಯನ್ನು ನೀವು ನೋಡಲು ಸಾಧ್ಯವಾಗುತ್ತದೆ. ಆದರೆ ಭಾರತದಲ್ಲಿ ಬೃಹತ್ ಸಂಖ್ಯೆಯಲ್ಲಿ ಉದ್ಯೋಗದ ಪೋರ್ಟಲ್ಸ್ ಇದ್ದು, ಆನ್-ಲೈನ್ ನಲ್ಲಿ ನಿಮಗೆ ಉದ್ಯೋಗದ ಅರ್ಜಿಯನ್ನು ತೋರಿಸುವುದಾದರೂ, ನಿಮ್ಮ ಮೇಲೆ ಮತ್ತು ನಿಮ್ಮ ಕೌಶಲಗಳ ಮೇಲೆ ಮತ್ತು ಇಂಟರ್ವ್ಯೂ ರೌಂಡ್ನಲ್ಲಿ ನೀವು ಹೇಗೆ ನಿಭಾಯಿಸುತ್ತೀರಿ ಎಂಬುದರ ಮೇಲೆ ಎಲ್ಲವೂ ಹೊಂದಿಕೊಂಡಿದೆ; ಮತ್ತು ಇದು ನಿಮಗೆ ಆ ಉದ್ಯೋಗ ಸಿಗುತ್ತದೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು.

ಶೀರ್ಷಿಕೆ:- ಮ್ಯಾನೇಜ್ಮೆಂಟ್ ಉದ್ಯೋಗಗಳು – ಭಾರತದಲ್ಲಿ...

ಕಳೆದ ಕೆಲವು ವರ್ಷಗಳಲ್ಲಿ ಭಾರತದ ಉದ್ಯೋಗ ಮಾರುಕಟ್ಟೆಯ ದೃಶ್ಯವು ಬಹಳಷ್ಟು ಬದಲಾಗಿದೆ. ದೇಶದಲ್ಲಿ ಮ್ಯಾನೇಜ್ಮೆಂಟ್ ಉದ್ಯೋಗಗಳು ಎಂದಿನಿಂದಲೂ ಅಸ್ತಿತ್ವದಲ್ಲಿವೆಯಾದರೂ, ಅವುಗಳಿಗೆ ಸಂಬಂಧಿಸಿದ ಇತ್ತೀಚಿನ ಪ್ರಚಾರವು ತುಂಬ ಅಸಾಮಾನ್ಯವಾಗಿದೆ. ಇಂದು ಎಲ್ಲ ಕ್ಷೇತ್ರಗಳಿಂದ ಬಂದ ವಿದ್ಯಾರ್ಥಿಗಳು ತಮ್ಮ ಜೀವನದ ಯಾವುದೋ ಒಂದು ಹಂತದಲ್ಲಿ ಮ್ಯಾನೇಜ್ಮೆಂಟ್ ಕೋರ್ಸನ್ನು ಅಧ್ಯಯನಮಾಡುವ ವಿಷಯದಲ್ಲಿ ಯೋಚಿಸುತ್ತಾರೆ. ಮತ್ತು ನೀವು ಸರಿಯಾದ ನಿಟ್ಟಿನಲ್ಲಿ ಯೋಚಿಸುವಲ್ಲಿ, ಕಾರಣ ತುಂಬ ಸ್ಪಷ್ಟ.

ಶೀರ್ಷಿಕೆ:- ವಿಮಾ ಗ್ರಾಹಕರ ಸೇವಾ ಪ್ರತಿನಿಧಿಯ...

ವಿಮಾ ಗ್ರಾಹಕರ ಸೇವಾ ಪ್ರತಿನಿಧಿಯು ತಮ್ಮ ಉತ್ಪನ್ನ ಮತ್ತು ಸೇವೆಗಳಿಗೆ ಸಂಬಂಧಿಸಿದ ವಿಚಾರಣೆಗೆ ಪ್ರತಿಕ್ರಿಯಿಸಲಿಕ್ಕಾಗಿ ಗ್ರಾಹಕರಿಗೆ ಮಾಹಿತಿಯನ್ನು ಒದಗಿಸುತ್ತದೆ. ಅವನು / ಅವಳು ದೂರುಗಳನ್ನು ಹ್ಯಾಂಡಲ್ ಮಾಡಬೇಕು ಮತ್ತು ಅವುಗಳನ್ನು ಬಗೆಹರಿಸಬೇಕು. ಇದರ ಜೊತೆಗೆ, ವಿಮಾ ಸೇವಾ ಪ್ರತಿನಿಧಿಯ ಜವಾಬ್ದಾರಿಗಳು ಕಸ್ಟಮರ್ ಕೇರ್ ಪ್ರತಿನಿಧಿಯ ಜವಾಬ್ದಾರಿಗಳಿಗೆ ಸಮನಾಗಿರುತ್ತವೆ, ಏಕೆಂದರೆ ಈ ವ್ಯಕ್ತಿಯು ಅಗತ್ಯವಿರುವ ಸಹಾಯವನ್ನು ಮತ್ತು ಗ್ರಾಹಕರಿಗೆ ಬೆಂಬಲವನ್ನು ನೀಡುವವನಾಗಿರುತ್ತಾನೆ. ಕೆಲವೊಮ್ಮೆ ಒಂದು ರೆಸಲ್ಯೂಶನ್ ಒದಗಿಸಲಿಕ್ಕಾಗಿ ಅವನು / ಅವಳು ದೂರುಗಳನ್ನು ನಿಯೋಜಿತ ಇಲಾಖೆಗೆ ಫಾರ್ವರ್ಡ್ ಮಾಡಬೇಕಾಗಿರುತ್ತದೆ.

ಶೀರ್ಷಿಕೆ:- ಮಹಿಳೆಯರ ಡಿಪ್ಲೊಮಾ ಇಂಜಿನಿಯರಿಂಗ್ ಉದ್ಯೋಗಗಳಲ...

ಇಷ್ಟರ ತನಕ ಭಾರತದಲ್ಲಿ ನುರಿತ ಕೆಲಸವನ್ನು ಕಲಿತು ಸಾಂಪ್ರದಾಯಿಕವಾಗಿ ಮಾಡಲಾಗುತ್ತಿತ್ತು. ಅನೇಕವೇಳೆ ಕೆಲಸ ಮಾಡುತ್ತಿದ್ದ ತಮ್ಮ ತಂದೆಯಿಂದ ಗಂಡು ಮಕ್ಕಳು ಈ ಕೌಶಲಗಳನ್ನು ಕಲಿಯುತ್ತಿದ್ದರು.

ಆದರೆ ಕಳೆದ ಕೆಲವು ದಶಕಗಳಲ್ಲಿ ಕೌಶಲದ ಅಭಿವೃದ್ಧಿಗೆ ಸರಿಯಾದ ತರಬೇತಿಯ ಅವಶ್ಯಕತೆ ಇದೆ ಎಂಬುದನ್ನು ಮನಗಾಣಲಾಯಿತು.

ಶೀರ್ಷಿಕೆ:- ಭಾರತದ 10 ಅತ್ಯುತ್ತಮ ಕೌಶಲ...

ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಅಭೂತಪೂರ್ವ ಪಗ ಕಂಡುಬಂದಿದೆ. ಈ ಬೆಳವಣಿಗೆಯು ಮುಂದುವರಿಯುತ್ತದೆ ಮತ್ತು ಮುಂದಿನ 2-3 ದಶಕಗಳಲ್ಲಿ ಭಾರತದ ಆರ್ಥಿಕತೆಯು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಪರಿಣಮಿಸಲಿದೆ.

ಶೀರ್ಷಿಕೆ:- ಇಂಟರ್ವ್ಯೂಗಾಗಿ ಹೇಗೆ ತಯಾರಿಯನ್ನು ಮಾಡುವುದು...

ಇಂಟರ್ವ್ಯೂನ ಗುರಿಯು, ಉದ್ಯೋಗದ ವಿಷಯದಲ್ಲಿ ನಿಮಗೆ ಸೂಕ್ತವಾದ ಕೌಶಲಗಳು, ಜ್ಞಾನ ಮತ್ತು ಅನುಭವ ಇದೆ ಎಂದು ಅರ್ಥಮಾಡಿಕೊಳ್ಳುವುದೇ ಆಗಿದೆ. ಇಂಟರ್ವ್ಯೂ ಸಮಯದಲ್ಲಿ ನಿಮ್ಮನ್ನು ಇಂಟರ್ವ್ಯೂ ಮಾಡುವಂಥ ವ್ಯಕ್ತಿಯು ಏನು ನಂಬಬೇಕೆಂದರೆ, ಉದ್ಯೋಗದ ವಿವರಣೆ ನಿಮಗೆ ಅರ್ಥವಾಗಿದೆ, ಕಂಪೆನಿಯ ಕೆಲಸದ ಬಗ್ಗೆ ನಿಮಗೆ ಅರಿವಿದೆ ಮತ್ತು ಕಂಪೆನಿಯಲ್ಲಿ ನಿರ್ದಿಷ್ಟ ಸ್ಥಾನದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪೂರ್ಣ ರೀತಿಯಲ್ಲಿ ಸಿದ್ಧರಾಗಿದ್ದೀರಿ.

ಶೀರ್ಷಿಕೆ:- ಉದ್ಯೋಗಪಡೆಯನ್ನು ಸೇರುತ್ತೀರಾ? ಅದಕ್ಕಾಗಿ ನೀವ...

ಬಯೋಡೇಟಾ ಅನ್ನು ಹೇಗೆ ಸಿದ್ಧಪಡಿಸಬಹುದು?

ಕಂಟೆಂಟ್:- ನೀವು ಬಯೋಡೇಟಾ ಅನ್ನು ಈ ರೀತಿಯಲ್ಲಿ ಸಿದ್ಧಪಡಿಸಬಹುದು.

ಬಯೋಡೇಟಾ ಎಂದರೇನು? ನಾವು ಉದ್ಯೋಗಕ್ಕಾಗಿ ಅರ್ಜಿಯನ್ನು ಹಾಕುವಾಗ ಉದ್ಯೋಗದಾತರಿಗೆ/ಕಂಪೆನಿಗಳಿಗೆ ಸಲ್ಲಿಸುವ ದಾಖಲೆಪತ್ರವೇ ಬಯೋಡೇಟಾ ಆಗಿದೆ. ಬಯೋಡೇಟಾದ ಸಹಾಯದಿಂದ ನಾವು ನಮ್ಮ ಕೆಲಸದ ಅನುಭವ, ಶಿಕ್ಷಣ/ಅರ್ಹತೆ ಮತ್ತು ಕೌಶಲಗಳ ಕುರಿತು ಮಾಹಿತಿಯನ್ನು ನೀಡುತ್ತೇವೆ.

ಶೀರ್ಷಿಕೆ:- ಇಂಟರ್ವ್ಯೂನಲ್ಲಿ ಸಾಮಾನ್ಯವಾಗಿ ಕೇಳಲಾಗುವ 10...

ಇಂಟರ್ವ್ಯೂಗೆ ಹೋಗುವಾಗ ಆಗುವಂಥ ಅತಿ ದೊಡ್ಡ ಕುತೂಹಲವು ಯಾವುದೆಂದರೆ, ಯಾವುದರ ಕುರಿತು ನನಗೆ ಪ್ರಶ್ನೆ ಕೇಳಲಾಗುತ್ತದೆ ಎಂಬುದೇ. ಇಂಟರ್ವ್ಯೂ ಸಮಯದಲ್ಲಿ ಮಾ ಈ ವಿಷಯದ ನಿಜವಾದ ಪ್ರತಿಕ್ರಿಯೆಗಳನ್ನು ಕಂಡುಕೊಳ್ಳಬಹುದಾದರೂ, ಇಂಟರ್ವ್ಯೂನಲ್ಲಿ ಸಾಮಾನ್ಯವಾಗಿ ಕೇಳಲಾಗುವ ಕೆಲವು ಪ್ರಶ್ನೆಗಳು ಇ. ನೀವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಅಭ್ಯಾಸ ಮಾಡುವಲ್ಲಿ, ನೀವು ಆತ್ಮವಿಶ್ವಾಸದಿಂದ ಉತ್ತರಿಸಲು ಸಾಧ್ಯವಾಗುತ್ತದೆ ಮತ್ತು ಬೇರೆ ಪ್ರಶ್ನೆಗಳಿಗೆ ಉತ್ತರಿಸಲು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತೀರಿ.

ಶಾಲೆ ಪೂರ್ಣಗೊಳಿಸಿದ ಬಳಿಕ ಉತ್ತಮ ಭವಿಷ್ಯಕ್ಕಾಗಿ...

IFFCOYuva ಉದ್ಯೋಗ ಪೋರ್ಟಲ್ ನಲ್ಲಿರುವ ವೆಬ್ ಮೆಟ್ರಿಕ್ಸ್ ಅನ್ನು ನೋಡಿದರೆ, ನಿಜವಾಗಲೂ ಜನರು ಲಾಭದಾಯಕ ಕ್ಷೇತ್ರಗಳೆಂದು ಪರಿಗಣಿಸಿರುವ ವಲಯಗಳಲ್ಲಿ ನೈಜ ಟ್ರೆಂಡ್ ಇರುವುದು ತಿಳಿದುಬರುತ್ತದೆ. ಈಗಷ್ಟೇ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿರುವಂಥ ವಿದ್ಯಾರ್ಥಿಗಳು, ಪ್ರತಿಫಲ ನೀಡುತ್ತವೆಂದು ಪರಿಗಣಿಸಲಾದ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಾದ್ದು ಮುಖ್ಯವಾಗುತ್ತದೆ.  ಈ ಮೂಲಕವಾಗಿ ಅವರು ತಮ್ಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಹೇಗಿಡಬೇಕು ಎಂಬ ಬಗ್ಗೆ ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.