Follow Us!

ಶೀರ್ಷಿಕೆ:- ಉತ್ತಮ ವೃತ್ತಿಜೀವನದ ಬೆಳವಣಿಗೆಗಾಗಿ ಸಲಹೆಗಳು

05 January 2019
img

ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಸ್ವತಃ ನೀವೇ ಜವಾಬ್ದಾರರು. ಯಾರ ವೃತ್ತಿಜೀವನಗಳು ತ್ವರಿತಗತಿಯಲ್ಲಿ ಸಾಗುತ್ತವೋ ಅಂಥ ಜನರಿಗೆ ಗೊತ್ತಿದೆ ಏನೆಂದರೆ ಕಾರ್ಯಕ್ಷೇತ್ರದಲ್ಲಿ ಸ್ಪರ್ಧೆಯು ಯಾವಾಗಲೂ ಇರುತ್ತದೆ, ಮತ್ತು ಯಶಸ್ವಿಯಾಗಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ತಮ್ಮ ವೃತ್ತಿಜೀವನದ ಬೆಳವಣಿಗೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ವೃತ್ತಿಜೀವನವು ಎಲ್ಲಿ ಬೆಳೆಯಬೇಕೆಂದು ನೀವು ಬಯಸುತ್ತೀರೋ ಅಂಥ ಸನ್ನಿವೇಶಗಳಲ್ಲಿ, ನೀವು ಹೆಚ್ಚನ್ನು ಕಲಿಯಲು ಮತ್ತು ನಿಮ್ಮ ಪರಿಣಿತಿಯನ್ನು ಅನ್ವಯಿಸಲು ಸಾಧ್ಯವಿರುವಂಥ ಒಂದು ಉದ್ಯೋಗಕ್ಕಾಗಿ ನೀವು ಯಾವಾಗಲೂ ಹುಡುಕಬಹುದು. ಉದಾಹರಣೆಗೆ, ಈ ಉದ್ದೇಶವನ್ನು ಪೂರೈಸಲಿಕ್ಕಾಗಿ ನೀವು ಫ್ರೆಶರ್ಸ್ ಗಾಗಿರುವ ಉದ್ಯೋಗಕ್ಕಾಗಿ ಬೆಂಗಳೂರಿನಂತಹ ಅಥವಾ ಮುಂಬೈನಂತಹ ನಗರಗಳಲ್ಲಿ ಉದ್ಯೋಗಕ್ಕಾಗಿ ಆನ್-ಲೈನ್ ಹುಡುಕಬಹುದು. ನಿಮ್ಮ ವೃತ್ತಿಜೀವನದ ಬೆಳವಣಿಗೆಗಾಗಿ, ನಿಮ್ಮ ವೃತ್ತಿಜೀವನವು ವಿಸ್ಮಯಕರವಾದ ರೀತಿಯಲ್ಲಿ ಬೆಳೆಯುವಂತೆ ಬಿಡಲಿಕ್ಕಾಗಿ ನೀವು ಉಪಯೋಗಿಸಬಹುದಾದ ಸಲಹೆಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:

ನಿಮ್ಮ ಕನಸುಗಳ ಬಗ್ಗೆ ಆಲೋಚಿಸಿ

ನಿಮ್ಮ ವೃತ್ತಿಜೀವನಕ್ಕಾಗಿ ಮತ್ತು ಇಡೀ ಜೀವನಕ್ಕಾಗಿ, ನಿಮ್ಮ ಕನಸು ಏನಾಗಿದೆ ಎಂಬುದನ್ನು ತಿಳಿಯುವುದು ತುಂಬ ಪ್ರಾಮುಖ್ಯ. ನಿಮಗೆ ಕೇವಲ ಒಂದು ಜೀವನ ಮಾತ್ರ ಇರುವುದರಿಂದ, ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ನಡುವೆ ತುಂಬ ವ್ಯತ್ಯಾಸವನ್ನು ಮಾಡಬಾರದು ಮತ್ತು ಎರಡೂ ಕ್ಷೇತ್ರಗಳಲ್ಲಿ ನಿಮಗೆ ಯಾವ ಮಹತ್ವಾಕಾಂಕ್ಷೆಗಳು ಇವೆ ಎಂಬುದರ ಕುರಿತು ಯೋಚಿಸಬೇಕು. ಇವು ಸಮಯಾನಂತರ ಬದಲಾಗುವ ಸಾಧ್ಯತೆ ಇರುವುದಾದರೂ, ಯಾವುದೇ ಗುರಿಯಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದುದರಿಂದ, ನಿಮಗೆ ಏನಾಗುವ ಕನಸಿದೆ ಎಂಬುದರ ಕುರಿತು ಯೋಚಿಸುವ ಅಗತ್ಯವಿದೆ ಮತ್ತು ಅದನ್ನು ಲಿಖಿತರೂಪದಲ್ಲಿ ನಮೂದಿಸಿ. ತದನಂತರ, ನಿಮ್ಮ ವೃತ್ತಿಜೀವನವನ್ನು ಬೆಳೆಸುವ ನಿಟ್ಟಿನಲ್ಲಿ ನೀವು ಶ್ರದ್ಧೆಯಿಂದ ಕಾರ್ಯನಡಿಸಲು ಪ್ರಾರಂಭಿಸಬೇಕು.

ಆತ್ಮವಿಶ್ವಾಸ

ನಿಮ್ಮ ವೃತ್ತಿಜೀವನವು ಪ್ರಗತಿಗೊಳ್ಳುತ್ತಾ ಹೋದಂತೆ ಮತ್ತು ನಿಮ್ಮ ಕೌಶಲಗಳು ಹೆಚ್ಚುತ್ತಾ ಹೋದಂತೆ, ನೀವು ಹೆಚ್ಚಿನ ಅನುಭವವನ್ನು ಪಡೆಯುತ್ತೀರಿ ಮತ್ತು ಒಂದು ನಿರ್ದಿಷ್ಟ ಸಂಸ್ಥೆಗೆ ನಿಮ್ಮ ಪ್ರಾಮುಖ್ಯತೆ ಹಾಗೂ ನಿಮ್ಮ ಕೊಡುಗೆಯ ಬಗ್ಗೆ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೀರಿ. ನೀವು ಇಷ್ಟರ ತನಕ ಬೆಳೆಸಿಕೊಂಡಿರುವ ಕೌಶಲಗಳಲ್ಲಿ ನಂಬಿಕೆಯಿಡಿ ಮತ್ತು ಅವುಗಳ ಮೇಲೆ ಇನ್ನಷ್ಟು ಹಿಡಿತವನ್ನು ಸಾಧಿಸುತ್ತಾ ಇರಿ. ಹೀಗೆ ಮಾಡುವುದು ನಿಮ್ಮ ವೃತ್ತಿಜೀವನವನ್ನು ಬೆಳೆಸಿಕೊಳ್ಳುವುದರಲ್ಲಿ ಮತ್ತು ಒಂದು ಸಕಾರಾತ್ಮಕ ವೃತ್ತಿಜೀವನದ ಗ್ರಾಫ್ ರಚಿಸುವುದರಲ್ಲಿ ನಿಮಗೆ ಸಹಾಯಮಾಡುವುದು.

ಕಲಿಯಿರಿ, ಅಭ್ಯಾಸಮಾಡಿ ಮತ್ತು ಪ್ರಮಾಣೀಕೃತವನ್ನು ಪಡೆಯಿರಿ

ನೀವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರಲಿ ನೀವು ಯಾವಾಗಲೂ ಕಲಿಯುತ್ತಾ ಇರುವ ಅಗತ್ಯವಿದೆ. ನೀವು ಡಿಗ್ರಿಯನ್ನು ಪಡೆದಿರುವ ಅಥವಾ ನಿಮಗೆ ಆಸಕ್ತಿ ಇರುವ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ನೀವು ಅಭ್ಯಾಸ ಮಾಡಬಹುದು. ಅನೇಕ ಪ್ರ್ಯಾಕ್ಟೀಸ್ ಸೆಷನ್ ಗಳನ್ನು ನೀವು ಪೂರ್ಣಗೊಳಿಸಿದ ಬಳಿಕ ಮತ್ತು ಸಾಕಷ್ಟು ವಿಶ್ವಾಸವನ್ನು ಗಳಿಸಿದ ಬಳಿಕ, ನೀವು ಸ್ವತಃ ಪ್ರಮಾಣೀಕೃತವನ್ನು ಪಡೆಯಬಹುದು. ಇವುಗಳನ್ನು ಪಡೆದ ಬಳಿಕ ಈ ಪ್ರಮಾಣಪತ್ರಗಳು ನಿಮಗೆ ಉಪಯುಕ್ತ ಉದ್ಯೋಗ ಅವಕಾಶಗಳನ್ನು ಬಾಚಿಕೊಳ್ಳಲು ಸಹಾಯಮಾಡುತ್ತವೆ ಮತ್ತು ಹೀಗೆ ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಮತ್ತಷ್ಟು ನೆರವು ಸಿಗುತ್ತದೆ. ತದನಂತರ, ನೀವು ಜಾಬ್ ಸರ್ಚನ್ನು ಕ್ರಿಯೇಟ್ ಮಾಡಬಹುದು ಮತ್ತು ನಿಮಗೆ ಆಸಕ್ತಿಯಿರುವ ಹಾಗೂ ನಿಮ್ಮ ಸಾಮರ್ಥ್ಯಗಳಿಗೆ ಸೂಕ್ತವಾಗಿ ಹೊಂದುವ ಉದ್ಯೋಗಗಳಿಗಾಗಿ ಹುಡುಕಬಹುದು; ಉದಾಹರಣೆಗೆ, ಫೆಶರ್ಸ್ ಗಾಗಿರುವ ಎಲೆಕ್ಟ್ರಾನಿಕ್ಸ್ ಉದ್ಯೋಗಗಳಿಗಾಗಿ ನೀವು ಹುಡುಕಬಹುದು ಅಥವಾ ನಿಮ್ಮ ಕೌಶಲಗಳಿಗೆ ತಕ್ಕದಾದ ಹುದ್ದೆಗಳನ್ನು ಕಂಡುಕೊಳ್ಳಲು ಜಾಬ್ ಪೋರ್ಟಲ್ ನಲ್ಲಿ ಸುಮ್ಮನೆ 'ಕಂಪ್ಯೂಟರ್ ಆಪರೇಟರ್ ಜಾಬ್ಸ್ ನಿಯರ್ ಮಿ' ಎಂಬಲ್ಲಿ ಟೈಪ್ ಮಾಡಬಹುದು.

ಆದುದರಿಂದ ಪ್ರ್ಯಾಕ್ಟೀಸ್ ಮಾಡುವುದು ಮತ್ತು ಪ್ರಮಾಣೀಕೃತವನ್ನು ಪಡೆಯುವುದು, ಕೌಶಲದ ಬೆಳವಣಿಗೆಯಲ್ಲಿ ನಿಮಗೆ ಸಹಾಯಮಾಡುವುದು, ಇದರಿಂದಾಗಿ ನಿಮ್ಮ ಭಾವೀ ವೃತ್ತಿಜೀವನದ ಬೆಳವಣಿಗೆಗೆ ಪರಿಣಾಮಕಾರಿ ಸಹಾಯವು ದೊರಕುವುದು.

ನಿಮ್ಮ ಇಂಟರ್-ಪರ್ಸನಲ್ ಕೌಶಲಗಳಲ್ಲಿ ಪರಿಣಿತಿ ಪಡೆಯಿರಿ

ನಿಮಗೆ ಅತ್ಯುತ್ತಮ ಇಂಟರ್-ಪರ್ಸನಲ್ ಕೌಶಲಗಳು ಇರುವಲ್ಲಿ, ನಿಮ್ಮ ಜೊತೆ-ಕೆಲಸಗಾರರ ನಡುವೆ ನೀವು ಸುಲಭವಾಗಿ ಗಮನಿಸಲ್ಪಡುವಿರಿ. ಅಷ್ಟುಮಾತ್ರವಲ್ಲ, ನಿಮ್ಮ ವೃತ್ತಿಜೀವನಕ್ಕೆ ಹೊಸ ಸದವಕಾಶಗಳನ್ನು ತರಬಹುದಾದ ಬಾಹ್ಯ ಪ್ರೇರಣೆದಾರರ ಮನಸ್ಸುಗಳ ಮೇಲೆ ಪ್ರಭಾವ ಬೀರುವುದರಲ್ಲಿ ಈ ಕೌಶಲಗಳು ಅತ್ಯಧಿಕ ಮಟ್ಟಿಗೆ ಸಹಾಯ ಮಾಡುವವು.

ಜನರು ಏನು ಹೇಳಲು ಬಯಸುತ್ತಾರೋ ಅದನ್ನು ನೀವು ಎಚ್ಚರಿಕೆಯಿಂದ ಕೇಳಿಸಿಕೊಳ್ಳಬೇಕು ಮಾತ್ರವಲ್ಲ ನೀವು ಒಬ್ಬ ಪರಿಣಾಮಕಾರಿ ಸಂವಹನಕಾರರೂ ಆಗಿರಬೇಕು. ಬಲವಾದ ಇಂಟರ್-ಪರ್ಸನಲ್ ಕೌಶಲಗಳನ್ನು ಹೊಂದಿರುವುದು ನಿಮ್ಮ ವೃತ್ತಿಜೀವನವನ್ನು ಪರಿಣಾಮಕಾರಿಯಾಗಿ ನಿರ್ಮಿಸುತ್ತವೆ ಮತ್ತು ಅದರ ಬೆಳವಣಿಗೆಗೆ ನೆರವು ನೀಡುತ್ತದೆ.

ನಿಮ್ಮ ವೃತ್ತಿಜೀವನದ ಬೆಳವಣಿಗೆಯನ್ನು ವರ್ಧಿಸುವುದರಲ್ಲಿ ನಿಮಗೆ ಬಹಳಷ್ಟು ಸಹಾಯ ಮಾಡಬಹುದಾದ

ಪ್ರಾಮುಖ್ಯ ಮಾಹಿತಿ

+2 ಬಳಿಕ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಐಟಿಐ ಹೇಗೆ ನೆರವಾಗುತ್ತದೆ

ಕೈಗಾರಿಕಾ ತರಬೇತಿ ಸಂಸ್ಥೆಗಳು ಅಥವಾ ಐಟಿಐ ಗಳನ್ನು ಭಾರತ ಸರ್ಕಾರವು ನಿರ್ಮಿಸಿದ್ದು, ಇವುಗಳು ಕೇಂದ್ರ ಕಾರ್ಮಿಕ ಸಚಿವಾಲಯದ ವ್ಯಾಪ್ತಿಗೆ ಬರುತ್ತವೆ. ಐಟಿಐ ನಲ್ಲಿ ಪದವಿ ಪಡೆಯುವುದು ಕಡಿಮೆ ವೆಚ್ಚದಾಯಕ ಆಗಿರುವ ಕಾರಣ, ಭಾರತೀಯ ಜನಸಂಖ್ಯೆಯ ಅತಿದೊಡ್ಡ ಭಾಗಕ್ಕೆ ಇದೊಂದು ಸೂಕ್ತ ಆಯ್ಕೆಯಾಗಿರುತ್ತದೆ. ಈ ಪದವಿಗೆ ಅಗತ್ಯವಿರುವ ಕನಿಷ್ಠ ಶೈಕ್ಷಣಿಕ ಅರ್ಹತೆಯೂ ಹೆಚ್ಚೇನಿಲ್ಲ. ಯಾರಿಗೆ ತಾಂತ್ರಿಕ ಜ್ಞಾನವನ್ನು ಗಳಿಸಲು ಆಸಕ್ತಿಯಿದೆಯೋ, ಅಂಥವರು ಸುಲಭವಾಗಿ ಈ ಸಂಸ್ಥೆಗಳಿಗೆ ಸೇರ್ಪಡೆಯಾಗಬಹುದು.

+2 ಪೂರ್ಣಗೊಳಿಸಿದ ಬಳಿಕ ಅರ್ಜಿ ಸಲ್ಲಿಸಬಹುದಾದ ಉದ್ಯೋಗಗಳು

ಉತ್ತಮ ಭವಿಷ್ಯ ನಿರ್ಮಾಣಕ್ಕೆ ಉನ್ನತ ಶಿಕ್ಷಣ ಅಗತ್ಯ ಎಂಬ ಮಾತು ಜನಪ್ರಿಯಗೊಂಡಿದ್ದರೂ, ಭಾರತದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಅತ್ಯಗತ್ಯ ಎಂದೇನಿಲ್ಲ. ಹೈಸ್ಕೂಲು ಪೂರ್ಣಗೊಳಿಸಿದ ಜನರು ಕೂಡ ದೇಶದೊಳಗೇ ಇದ್ದುಕೊಂಡು ಉತ್ತಮ ವೇತನ ಗಳಿಸುವಂಥ ಅನೇಕ ಆಯ್ಕೆಗಳು ನಮ್ಮ ಮುಂದಿವೆ.

ನೀವು ಓದಿದ್ದು ಸರಿಯಾಗಿಯೇ ಇದೆ. ಕಾಲೇಜು ಪದವಿ ಇಲ್ಲ ಎಂದಾಕ್ಷಣ ನಿಮ್ಮ ಭವಿಷ್ಯವೇ ಮುಗಿಯಿತು ಎಂದು ಅರ್ಥವಲ್ಲ. ಪದವಿ ಇಲ್ಲದಿದ್ದರೂ, ನಿರ್ದಿಷ್ಟ ಪಾತ್ರಕ್ಕೆ ಅನುಗುಣವಾಗಿ ನೀವು ಕೂಡ ಶಿಸ್ತುಬದ್ಧವಾದ ವೇತನವಿರುವ ಉದ್ಯೋಗ ಪಡೆಯಬಹುದು.

ಪದವಿಯ ಬಳಿಕ ಸ್ಟಾರ್ಟಪ್ ನಲ್ಲಿ ಕೆಲಸ ಮಾಡುವುದರಿಂದ ಆಗುವ ಅನುಕೂಲತೆಗಳು

ಸ್ಟಾರ್ಟಪ್ ನಿಂದಾಗಿ ಉತ್ತಮ ಆದಾಯ ಗಳಿಸಿಕೊಳ್ಳಬಹುದು ಎಂಬ ಸಾಮಾನ್ಯ ಕಲ್ಪನೆ ಕೆಲವರಿಗಿದೆ. ಆದರೆ, ಸ್ಟಾರ್ಟಪ್ ನಲ್ಲಿ ಕೆಲಸ ಮಾಡುವುದರಿಂದ ಅದಕ್ಕಿಂತಲೂ ಹೆಚ್ಚಿನದನ್ನೇ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ, ಅನೇಕ ಪದವೀಧರರು ಸ್ಟಾರ್ಟಪ್ ಉದ್ಯೋಗಗಳಿಗೆ ಸೇರುತ್ತಿದ್ದಾರೆ. ಆದರೆ, ಆದಾಯ ಗಳಿಸುವ ಉದ್ದೇಶಕ್ಕಲ್ಲ, ಬದಲಿಗೆ ತಮ್ಮ ಕಲಿಕೆಯ ಆಯ್ಕೆಗಳನ್ನು ಗರಿಷ್ಠಗೊಳಿಸುವ ಉದ್ದೇಶದಿಂದ.

ನೀವು ಪದವಿಯನ್ನು ಪೂರ್ಣಗೊಳಿಸಿದ್ದು, ಸ್ಟಾರ್ಟಪ್ ಹೊಸ ಕಂಪನಿ ಆಯ್ದುಕೊಳ್ಳಬೇಕೋ, ಬೇಡವೋ ಎಂಬ ಬಗ್ಗೆ ಗೊಂದಲ ಹೊಂದಿದ್ದರೆ, ನೀವು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳು ಇಲ್ಲಿವೆ:

ಪೈಪ್ ಫಿಟ್ಟರ್ ವರ್ಸಸ್ ವೆಲ್ಡರ್ – ನಿಮಗೆ ಗೊತ್ತಿರಬೇಕಾದ ಅಂಶಗಳು

ಕೌಶಲ್ಯಭರಿತ ಉದ್ಯೋಗವನ್ನೇ ಕಲಿಯಬೇಕು ಎಂದು ನೀವು ನಿರ್ಧರಿಸಿದರೆ, ಅಂಥ ಸಾಕಷ್ಟು ಉದ್ಯೋಗಗಳ ಪೈಕಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಪೈಪ್ ಫಿಟ್ಟರ್ ಗಳು ಮತ್ತು ವೆಲ್ಡರ್ ಗಳು ಕೂಡ ಇಂಥ ಅಧಿಕ ಪಾವತಿಯ ಕೌಶಲ್ಯಭರಿತ ಉದ್ಯೋಗಗಳಲ್ಲಿ ಸೇರುತ್ತಾರೆ. ವಾಣಿಜ್ಯ ಮತ್ತು ವಸತಿಯಿಂದ ಹಿಡಿದು ಉತ್ಪಾದನಾ ಸ್ಥಾವರಗಳು ಹಾಗೂ ತೈಲ ಶುದ್ಧೀಕರಣ ಘಟಕಗಳವರೆಗೆ ಅನೇಕಾನೇಕ ಉದ್ದಿಮೆಗಳಲ್ಲಿ ಈ ಕ್ಷೇತ್ರದ ಪರಿಣಿತರ ಅಗತ್ಯವಿರುತ್ತದೆ. ಆದರೆ, ಇವೆರಡರ ನೈಜ ಕೆಲಸಗಳೇನು? ನೋಡೋಣ ಬನ್ನಿ.

ಕಂಪನಿಗಳು ತಮ್ಮ ಎಚ್ಆರ್ ಅಭ್ಯರ್ಥಿಗಳಲ್ಲಿ ಹುಡುಕುವಂಥ ಕೌಶಲ್ಯಗಳು

ಯಾವಾಗ ನೀವು ಎಚ್ಆರ್ ಅಂದರೆ ಮಾನವ ಸಂಪನ್ಮೂಲ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರೋ, ಆಗ ನೀವು ಮೇಜಿನ ಮತ್ತೊಂದು ಬದಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಅಂದರೆ, ಸಂದರ್ಶನ ನೀಡುವುದರ ಬದಲಿಗೆ ಸಂದರ್ಶನ ಪಡೆಯುವವರಾಗಿ ಮಾರ್ಪಾಡಾಗಬೇಕಾಗುತ್ತದೆ.

ಏಕೆಂದರೆ, ಒಬ್ಬ ಎಚ್ಆರ್ ಎಕ್ಸಿಕ್ಯೂಟಿವ್ ನ ಉದ್ಯೋಗದಲ್ಲಿ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಮತ್ತು ನಿರ್ದಿಷ್ಟ ಕಂಪನಿಯ ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವ ಕೆಲಸವು ಒಳಗೊಂಡಿರುತ್ತದೆ. ಈ ಉದ್ಯೋಗವು ದುರ್ಬಲ ಹೃದಯದವರಿಗೆ ಆಗಿಬರುವುದಿಲ್ಲ. ನೀವು ಮುಂಬೈ, ನೋಯ್ಡಾ ಅಥವಾ ನಿಮ್ಮ ಆದ್ಯತೆಯ ನಗರದಲ್ಲಿ ಎಚ್ಆರ್ ಎಕ್ಸಿಕ್ಯೂಟಿವ್ ಅಥವಾ ಫ್ರೆಷರ್ ಉದ್ಯೋಗವನ್ನು ಹುಡುಕುತ್ತಿದ್ದೀರಿ ಎಂದಾದರೆ, ನೀವು ಮೊದಲು ಎಚ್ಆರ್ ಅಭ್ಯರ್ಥಿಗಳಲ್ಲಿ ಯಾವ್ಯಾವ ಕೌಶಲ್ಯಗಳನ್ನು ಕಂಪನಿಗಳು ಬಯಸುತ್ತವೆ ಎಂಬುದನ್ನು ತಿಳಿದುಕೊಳ್ಳಲೇಬೇಕಾಗುತ್ತದೆ:

ನಿಮಗೆ ಗೊತ್ತಿರಬೇಕಾದ ಐದು ಐಟಿಐ ಉದ್ಯೋಗಗಳು

ಐಟಿಐ(ಕೈಗಾರಿಕಾ ತರಬೇತಿ ಸಂಸ್ಥೆ) ಉದ್ಯೋಗಗಳು ಶಾಲಾ ಶಿಕ್ಷಣ ಮುಗಿಸಿದವರಿಗೆಂದೇ ಇರುವಂಥದ್ದು. 10 ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ 100ಕ್ಕೂ ಹೆಚ್ಚು ಕೋರ್ಸ್ ಗಳು ಲಭ್ಯವಿದೆ. ಐಟಿಐ ಕೋರ್ಸ್ ಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವೆಂದರೆ:

  1. ಒಂದು ವರ್ಷದ ಐಟಿಐ ಕೋರ್ಸ್ ಗಳು
  2. ಎರಡು ವರ್ಷದ ಐಟಿಐ ಕೋರ್ಸ್ ಗಳು

ಕೋರ್ಸ್ ನ ಅವಧಿಯು ಐಟಿಐ ಉದ್ಯೋಗದ ಮೇಲೆ ಅವಲಂಬಿತವಾಗಿರುತ್ತವೆ. ನೀವು ಐಟಿಐ ಕೋರ್ಸ್ ವೊಂದಕ್ಕೆ ಸೇರಬಯಸುವುದಾದರೆ, ನಿಮಗೆ ಗೊತ್ತಿರಬೇಕಾದ 5 ಐಟಿಐ ಉದ್ಯೋಗಗಳು ಇಂತಿವೆ:

ಭಾರತದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗಗಳಿಗೆ ಬೇಕಾಗುವ ಪ್ರಮುಖ ಕೌಶಲ್ಯಗಳು in India

ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂದರೆ, ನೀವು ವಿವಿಧ ಕ್ಷೇತ್ರಗಳಲ್ಲಿ ಪರಿಣತರಾಗಿ ಹಲವು ಕೆಲಸಗಳನ್ನು ಮಾಡಬೇಕಾಗಿರುತ್ತದೆ. ನೀವು ಕೆಲಸ ಮಾಡುತ್ತಿರುವಂಥ ವಿವಿಧ ಡಿಜಿಟಲ್ ಮಾರ್ಕೆಟಿಂಗ್ ಅಭಿಯಾನಗಳಿಗೆ ಕ್ರಿಯಾಶೀಲತೆಯನ್ನು ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮಹತ್ವವನ್ನು ನೀವು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ನೀವು ಮುಂಬೈ, ಗುರುಗಾಂವ್ ಅಥವಾ ನೋಯ್ಡಾದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗ ಮಾಡಬೇಕೆಂದು ಬಯಸಿದ್ದಲ್ಲಿ ಅಥವಾ ಇನ್ನೂ ಒಂದು ಮೆಟ್ಟಿಲು ಮುಂದೆ ಹೋಗಿ, ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಕೆಲಸಕ್ಕೆ ಸೇರಬೇಕೆಂದು ಬಯಸಿದ್ದಲ್ಲಿ, ನೀವು ಈ ಕೆಳಗಿನ ಕೌಶಲ್ಯಗಳನ್ನು ಹೊಂದಿರಬೇಕಾಗುತ್ತದೆ:

ಸಂದರ್ಶನದ ವೇಳೆ ಏನನ್ನು ಧರಿಸಬೇಕು?

ಸಂದರ್ಶನದ ವೇಳೆ ಯಾವ ರೀತಿಯ ಉಡುಗೆಗಳನ್ನು ಧರಿಸಬೇಕು ಎಂಬ ಅನುಮಾನವು ಉದ್ಯೋಗ ಬೇಟೆ ಪ್ರಕ್ರಿಯೆಯಲ್ಲಿ ಮೂಡುತ್ತದೆ. ಸಂದರ್ಶನದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಎಷ್ಟು ಚೆನ್ನಾಗಿ ನೀವು ಉತ್ತರಿಸುತ್ತೀರಿ ಎನ್ನುವುದು ಮಾತ್ರವಲ್ಲದೆ, ನಿಮ್ಮನ್ನು ನೀವು ಹೇಗೆ ತೋರಿಸಿಕೊಳ್ಳುತ್ತೀರಿ ಎಂಬುದರ ಮೇಲೂ ಯಶಸ್ವಿ ಸಂದರ್ಶನ ಅವಲಂಬಿಸಿರುತ್ತದೆ. ಹೀಗಾಗಿಯೇ ಸ್ಮಾರ್ಟ್ ಆಗಿರುವ ಹಾಗೂ ಪರಿಪೂರ್ಣವಾದ ತೋರ್ಪಡಿಕೆಯು ಎಷ್ಟು ಮುಖ್ಯವೆಂದರೆ, ನೀವು ಆ ಕಂಪನಿಗೆ ಸೂಕ್ತವಾದ ವ್ಯಕ್ತಿ ಎಂಬ ಭಾವನೆಯು ಉದ್ಯೋಗಕ್ಕೆ ಸೇರ್ಪಡೆಗೊಳಿಸುತ್ತಿರುವ ಮ್ಯಾನೇಜರ್ ನ ಮನದಲ್ಲಿ ಮೂಡಲು ಇದು ಸಹಾಯಕವಾಗುತ್ತದೆ.

ಸಂದರ್ಶನದ ವೇಳೆ ಏನನ್ನು ಧರಿಸುವುದು ಎಂಬ ಯೋಚನೆಯಲ್ಲಿರುವಾಗ ನೀವು ಅನುಸರಿಸಬಹುದಾದ ಕೆಲವು ಸಲಹೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ: 

ನಿಮ್ಮ ವೃತ್ತಿಜೀವನವನ್ನು ಬಹಳ ಎತ್ತರಕ್ಕೆ ಮುಟ್ಟಿಸಬಹುದಾದ ಪ್ರಮುಖ ಕೌಶಲಗಳ ಶ್ರೇಣಿಗಳು

ಮಾರುಕಟ್ಟೆಯು ತುಂಬ ವ್ಯಾಪಕವಾಗಿ ವೈವಿಧ್ಯಮಯವಾಗಿರುವುದು ಮಾತ್ರವಲ್ಲ ನಿರಂತರವಾಗಿ ಬದಲಾಗುತ್ತಿರುವಂಥ ಸಮಯಗಳಲ್ಲಿ ನಾವು ಜೀವಿಸುತ್ತಿದ್ದೇವೆ. ಆದುದರಿಂದ, ಕೇವಲ ಜೀವನವನ್ನು ಮುಂದುವರಿಸಲು ಮಾತ್ರವೇ ಅಲ್ಲ ಬದಲಾಗಿ ಈ ಕ್ರಿಯಾತ್ಮಕ ಹಾಗೂ ಬದಲಾಗುತ್ತಿರುವ ಕೆಲಸದ ಪರಿಸರದಲ್ಲಿ ಎತ್ತರಕ್ಕೆ ಬೆಳೆಯಲು ಬಯಸುವ ಯಾರೇ ಆಗಲಿ ಅವರು ಹೊಂದಾಣಿಕೆ ಮತ್ತು ಪ್ರಯೋಜನವಾದಿ ದೃಷ್ಟಿಕೋನಗಳಂಥ ಪ್ರಮುಖ ಗುಣಗಳನ್ನು ಹೊಂದಿರಬೇಕು.

ಒಬ್ಬ ಫ್ರೆಷರ್ ಆಗಿ ನೀವು ಒಂದು ಒಳ್ಳೇ ಉದ್ಯೋಗವನ್ನು ಹೇಗೆ

ಆದರೂ ಮುಂಬೈ ಮತ್ತು ಇತರ ಮಹಾನಗರಗಳಲ್ಲಿ ಉದ್ಯೋಗವನ್ನು ಪಡೆಯುವುದು ಮತ್ತು ತಮಗೋಸ್ಕರ ಒಳ್ಳೇ ಉದ್ಯೋಗವನ್ನು ಹೇಗೆ ಹುಡುಕುವುದು ಎಂಬುದು ಹೊಸ ಪದವೀಧರರ ಮತ್ತು ಫ್ರೆಷರ್ಸ್ ರಿಗೆ ಮುಖ್ಯವಾದ ಚಿಂತೆಗಳಲ್ಲಿ ಒಂದಾಗಿರುತ್ತದೆ. ಮೊದಲನೆಯದಾಗಿ ಫ್ರೆಷರ್ಸ್ ಗಳು ತಮ್ಮನ್ನು ಇತರರಿಗಿಂತ ಭಿನ್ನರಾಗಿ ತೋರಿಸಿಕೊಳ್ಳಲು, ಸರಿಯಾದ ನಿರ್ಣಯಗಳನ್ನು ಮಾಡಲು ಮತ್ತು ಸೂಕ್ತವಾದ ಉದ್ಯೋಗವನ್ನು ಕಂಡುಕೊಳ್ಳುವ ತನಕ ವಿವಿಧ ಲಿಸ್ಟಿಂಗ್ನಲ್ಲಿ ಉದ್ಯೋಗಗಳಿಗಾಗಿ ಅರ್ಜಿ ಸಲ್ಲಿಸಲು ಸಿದ್ಧರಾಗಿರಬೇಕು.

ಶೀರ್ಷಿಕೆ:- ಉತ್ತಮ ವೃತ್ತಿಜೀವನದ ಬೆಳವಣಿಗೆಗಾಗಿ ಸಲಹೆಗಳು

ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಸ್ವತಃ ನೀವೇ ಜವಾಬ್ದಾರರು. ಯಾರ ವೃತ್ತಿಜೀವನಗಳು ತ್ವರಿತಗತಿಯಲ್ಲಿ ಸಾಗುತ್ತವೋ ಅಂಥ ಜನರಿಗೆ ಗೊತ್ತಿದೆ ಏನೆಂದರೆ ಕಾರ್ಯಕ್ಷೇತ್ರದಲ್ಲಿ ಸ್ಪರ್ಧೆಯು ಯಾವಾಗಲೂ ಇರುತ್ತದೆ, ಮತ್ತು ಯಶಸ್ವಿಯಾಗಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ತಮ್ಮ ವೃತ್ತಿಜೀವನದ ಬೆಳವಣಿಗೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ವೃತ್ತಿಜೀವನವು ಎಲ್ಲಿ ಬೆಳೆಯಬೇಕೆಂದು ನೀವು ಬಯಸುತ್ತೀರೋ ಅಂಥ ಸನ್ನಿವೇಶಗಳಲ್ಲಿ, ನೀವು ಹೆಚ್ಚನ್ನು ಕಲಿಯಲು ಮತ್ತು ನಿಮ್ಮ ಪರಿಣಿತಿಯನ್ನು ಅನ್ವಯಿಸಲು ಸಾಧ್ಯವಿರುವಂಥ ಒಂದು ಉದ್ಯೋಗಕ್ಕಾಗಿ ನೀವು ಯಾವಾಗಲೂ ಹುಡುಕಬಹುದು.

ಶೀರ್ಷಿಕೆ:- ಭಾರತೀಯ ಉದ್ಯೋಗ ಮಾರುಕಟ್ಟೆಯಲ್ಲಿ ಯಾವ ಕೋರ್ಸು

ಹಳೆಯ ಕಾಲಕ್ಕೆ ವ್ಯತಿರಿಕ್ತವಾಗಿ ವಿದ್ಯಾರ್ಥಿಗಳು ಇಂದು ದೂರದೃಷ್ಟಿಯುಳ್ಳವರಾಗಿದ್ದಾರೆ ಮತ್ತು ವಿವೇಚನಾಶಕ್ತಿಯುಳ್ಳವರಾಗಿದ್ದಾರೆ, ವಿಶೇಷವಾಗಿ ತಾವು ಅನುಸರಿಸಲು ಬಯಸುವ ವೃತ್ತಿಜೀವನವನ್ನು ಆಯ್ಕೆಮಾಡುವ ವಿಷಯದಲ್ಲಿ.  ಪ್ರಸ್ತುತ ಸನ್ನಿವೇಶದಲ್ಲಿ,  ಬೇಕಾದಷ್ಟು ಸಂಖ್ಯೆಯಲ್ಲಿ ವೃತ್ತಿಜೀವನದ ಆಯ್ಕೆಗಳು ಲಭ್ಯ ಇರುವುದರಿಂದ, ಮೇಲೆ ತಿಳಿಸಲಾಗಿರುವ ಗುಣಗಳು ವಿದ್ಯಾರ್ಥಿಗಳಲ್ಲಿರುವುದು ಅವರು ಗೊಂದಲಕ್ಕೊಳಗಾಗದಂತೆ ತಡೆಯಲು ಅತ್ಯಧಿಕ ಮಟ್ಟಿಗೆ ಸಹಾಯಮಾಡಬಲ್ಲದು.

ಉದ್ಯೋಗದಾತರು ಕೆಲಸಗಾರರಲ್ಲಿ ಯಾವ ಕೌಶಲಗಳನ್ನು ೂಂರೕಕು?

ಹೆಚ್ಚುಕಡಿಮೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನದ ಏಕೀಕರಣದಿಂದಾಗಿ, ಆನ್-ಲೈನ್ ಉದ್ಯೋಗದ ಅರ್ಜಿಗಳನ್ನು ಕಂಡುಕೊಳ್ಳುವುದು ಕಷ್ಟಕರ ಸಂಗತಿಯೇನಲ್ಲ. ನೀವು ಸರಿಯಾದ ನಿಯತಾಂಕಗಳ ಸಹಾಯದಿಂದ ಹುಡುಕಬೇಕಾಗಿದೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಲಭ್ಯವಿರುವ ಉದ್ಯೋಗಗಳ ದೊಡ್ಡ ಪಟ್ಟಿಯನ್ನು ನೀವು ನೋಡಲು ಸಾಧ್ಯವಾಗುತ್ತದೆ. ಆದರೆ ಭಾರತದಲ್ಲಿ ಬೃಹತ್ ಸಂಖ್ಯೆಯಲ್ಲಿ ಉದ್ಯೋಗದ ಪೋರ್ಟಲ್ಸ್ ಇದ್ದು, ಆನ್-ಲೈನ್ ನಲ್ಲಿ ನಿಮಗೆ ಉದ್ಯೋಗದ ಅರ್ಜಿಯನ್ನು ತೋರಿಸುವುದಾದರೂ, ನಿಮ್ಮ ಮೇಲೆ ಮತ್ತು ನಿಮ್ಮ ಕೌಶಲಗಳ ಮೇಲೆ ಮತ್ತು ಇಂಟರ್ವ್ಯೂ ರೌಂಡ್ನಲ್ಲಿ ನೀವು ಹೇಗೆ ನಿಭಾಯಿಸುತ್ತೀರಿ ಎಂಬುದರ ಮೇಲೆ ಎಲ್ಲವೂ ಹೊಂದಿಕೊಂಡಿದೆ; ಮತ್ತು ಇದು ನಿಮಗೆ ಆ ಉದ್ಯೋಗ ಸಿಗುತ್ತದೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು.

ಶೀರ್ಷಿಕೆ:- ಮ್ಯಾನೇಜ್ಮೆಂಟ್ ಉದ್ಯೋಗಗಳು – ಭಾರತದಲ್ಲಿ ಜನಪ

ಕಳೆದ ಕೆಲವು ವರ್ಷಗಳಲ್ಲಿ ಭಾರತದ ಉದ್ಯೋಗ ಮಾರುಕಟ್ಟೆಯ ದೃಶ್ಯವು ಬಹಳಷ್ಟು ಬದಲಾಗಿದೆ. ದೇಶದಲ್ಲಿ ಮ್ಯಾನೇಜ್ಮೆಂಟ್ ಉದ್ಯೋಗಗಳು ಎಂದಿನಿಂದಲೂ ಅಸ್ತಿತ್ವದಲ್ಲಿವೆಯಾದರೂ, ಅವುಗಳಿಗೆ ಸಂಬಂಧಿಸಿದ ಇತ್ತೀಚಿನ ಪ್ರಚಾರವು ತುಂಬ ಅಸಾಮಾನ್ಯವಾಗಿದೆ. ಇಂದು ಎಲ್ಲ ಕ್ಷೇತ್ರಗಳಿಂದ ಬಂದ ವಿದ್ಯಾರ್ಥಿಗಳು ತಮ್ಮ ಜೀವನದ ಯಾವುದೋ ಒಂದು ಹಂತದಲ್ಲಿ ಮ್ಯಾನೇಜ್ಮೆಂಟ್ ಕೋರ್ಸನ್ನು ಅಧ್ಯಯನಮಾಡುವ ವಿಷಯದಲ್ಲಿ ಯೋಚಿಸುತ್ತಾರೆ. ಮತ್ತು ನೀವು ಸರಿಯಾದ ನಿಟ್ಟಿನಲ್ಲಿ ಯೋಚಿಸುವಲ್ಲಿ, ಕಾರಣ ತುಂಬ ಸ್ಪಷ್ಟ.

ಶೀರ್ಷಿಕೆ:- ವಿಮಾ ಗ್ರಾಹಕರ ಸೇವಾ ಪ್ರತಿನಿಧಿಯ ಪಾತ್ರ

ವಿಮಾ ಗ್ರಾಹಕರ ಸೇವಾ ಪ್ರತಿನಿಧಿಯು ತಮ್ಮ ಉತ್ಪನ್ನ ಮತ್ತು ಸೇವೆಗಳಿಗೆ ಸಂಬಂಧಿಸಿದ ವಿಚಾರಣೆಗೆ ಪ್ರತಿಕ್ರಿಯಿಸಲಿಕ್ಕಾಗಿ ಗ್ರಾಹಕರಿಗೆ ಮಾಹಿತಿಯನ್ನು ಒದಗಿಸುತ್ತದೆ. ಅವನು / ಅವಳು ದೂರುಗಳನ್ನು ಹ್ಯಾಂಡಲ್ ಮಾಡಬೇಕು ಮತ್ತು ಅವುಗಳನ್ನು ಬಗೆಹರಿಸಬೇಕು. ಇದರ ಜೊತೆಗೆ, ವಿಮಾ ಸೇವಾ ಪ್ರತಿನಿಧಿಯ ಜವಾಬ್ದಾರಿಗಳು ಕಸ್ಟಮರ್ ಕೇರ್ ಪ್ರತಿನಿಧಿಯ ಜವಾಬ್ದಾರಿಗಳಿಗೆ ಸಮನಾಗಿರುತ್ತವೆ, ಏಕೆಂದರೆ ಈ ವ್ಯಕ್ತಿಯು ಅಗತ್ಯವಿರುವ ಸಹಾಯವನ್ನು ಮತ್ತು ಗ್ರಾಹಕರಿಗೆ ಬೆಂಬಲವನ್ನು ನೀಡುವವನಾಗಿರುತ್ತಾನೆ. ಕೆಲವೊಮ್ಮೆ ಒಂದು ರೆಸಲ್ಯೂಶನ್ ಒದಗಿಸಲಿಕ್ಕಾಗಿ ಅವನು / ಅವಳು ದೂರುಗಳನ್ನು ನಿಯೋಜಿತ ಇಲಾಖೆಗೆ ಫಾರ್ವರ್ಡ್ ಮಾಡಬೇಕಾಗಿರುತ್ತದೆ.

ಶೀರ್ಷಿಕೆ:- ಮಹಿಳೆಯರ ಡಿಪ್ಲೊಮಾ ಇಂಜಿನಿಯರಿಂಗ್ ಉದ್ಯೋಗಗಳಲ

ಇಷ್ಟರ ತನಕ ಭಾರತದಲ್ಲಿ ನುರಿತ ಕೆಲಸವನ್ನು ಕಲಿತು ಸಾಂಪ್ರದಾಯಿಕವಾಗಿ ಮಾಡಲಾಗುತ್ತಿತ್ತು. ಅನೇಕವೇಳೆ ಕೆಲಸ ಮಾಡುತ್ತಿದ್ದ ತಮ್ಮ ತಂದೆಯಿಂದ ಗಂಡು ಮಕ್ಕಳು ಈ ಕೌಶಲಗಳನ್ನು ಕಲಿಯುತ್ತಿದ್ದರು.

ಆದರೆ ಕಳೆದ ಕೆಲವು ದಶಕಗಳಲ್ಲಿ ಕೌಶಲದ ಅಭಿವೃದ್ಧಿಗೆ ಸರಿಯಾದ ತರಬೇತಿಯ ಅವಶ್ಯಕತೆ ಇದೆ ಎಂಬುದನ್ನು ಮನಗಾಣಲಾಯಿತು.

ಶೀರ್ಷಿಕೆ:- ಭಾರತದ 10 ಅತ್ಯುತ್ತಮ ಕೌಶಲ ಆಧಾರಿತ ಉದ್ಯೋಗಗಳ

ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಅಭೂತಪೂರ್ವ ಪಗ ಕಂಡುಬಂದಿದೆ. ಈ ಬೆಳವಣಿಗೆಯು ಮುಂದುವರಿಯುತ್ತದೆ ಮತ್ತು ಮುಂದಿನ 2-3 ದಶಕಗಳಲ್ಲಿ ಭಾರತದ ಆರ್ಥಿಕತೆಯು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಪರಿಣಮಿಸಲಿದೆ.

ಶೀರ್ಷಿಕೆ:- ಇಂಟರ್ವ್ಯೂಗಾಗಿ ಹೇಗೆ ತಯಾರಿಯನ್ನು ಮಾಡುವುದು

ಇಂಟರ್ವ್ಯೂನ ಗುರಿಯು, ಉದ್ಯೋಗದ ವಿಷಯದಲ್ಲಿ ನಿಮಗೆ ಸೂಕ್ತವಾದ ಕೌಶಲಗಳು, ಜ್ಞಾನ ಮತ್ತು ಅನುಭವ ಇದೆ ಎಂದು ಅರ್ಥಮಾಡಿಕೊಳ್ಳುವುದೇ ಆಗಿದೆ. ಇಂಟರ್ವ್ಯೂ ಸಮಯದಲ್ಲಿ ನಿಮ್ಮನ್ನು ಇಂಟರ್ವ್ಯೂ ಮಾಡುವಂಥ ವ್ಯಕ್ತಿಯು ಏನು ನಂಬಬೇಕೆಂದರೆ, ಉದ್ಯೋಗದ ವಿವರಣೆ ನಿಮಗೆ ಅರ್ಥವಾಗಿದೆ, ಕಂಪೆನಿಯ ಕೆಲಸದ ಬಗ್ಗೆ ನಿಮಗೆ ಅರಿವಿದೆ ಮತ್ತು ಕಂಪೆನಿಯಲ್ಲಿ ನಿರ್ದಿಷ್ಟ ಸ್ಥಾನದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪೂರ್ಣ ರೀತಿಯಲ್ಲಿ ಸಿದ್ಧರಾಗಿದ್ದೀರಿ.

ಶೀರ್ಷಿಕೆ:- ಉದ್ಯೋಗಪಡೆಯನ್ನು ಸೇರುತ್ತೀರಾ? ಅದಕ್ಕಾಗಿ ನೀವ

ಬಯೋಡೇಟಾ ಅನ್ನು ಹೇಗೆ ಸಿದ್ಧಪಡಿಸಬಹುದು?

ಕಂಟೆಂಟ್:- ನೀವು ಬಯೋಡೇಟಾ ಅನ್ನು ಈ ರೀತಿಯಲ್ಲಿ ಸಿದ್ಧಪಡಿಸಬಹುದು.

ಬಯೋಡೇಟಾ ಎಂದರೇನು? ನಾವು ಉದ್ಯೋಗಕ್ಕಾಗಿ ಅರ್ಜಿಯನ್ನು ಹಾಕುವಾಗ ಉದ್ಯೋಗದಾತರಿಗೆ/ಕಂಪೆನಿಗಳಿಗೆ ಸಲ್ಲಿಸುವ ದಾಖಲೆಪತ್ರವೇ ಬಯೋಡೇಟಾ ಆಗಿದೆ. ಬಯೋಡೇಟಾದ ಸಹಾಯದಿಂದ ನಾವು ನಮ್ಮ ಕೆಲಸದ ಅನುಭವ, ಶಿಕ್ಷಣ/ಅರ್ಹತೆ ಮತ್ತು ಕೌಶಲಗಳ ಕುರಿತು ಮಾಹಿತಿಯನ್ನು ನೀಡುತ್ತೇವೆ.

ಶೀರ್ಷಿಕೆ:- ಇಂಟರ್ವ್ಯೂನಲ್ಲಿ ಸಾಮಾನ್ಯವಾಗಿ ಕೇಳಲಾಗುವ 10

ಇಂಟರ್ವ್ಯೂಗೆ ಹೋಗುವಾಗ ಆಗುವಂಥ ಅತಿ ದೊಡ್ಡ ಕುತೂಹಲವು ಯಾವುದೆಂದರೆ, ಯಾವುದರ ಕುರಿತು ನನಗೆ ಪ್ರಶ್ನೆ ಕೇಳಲಾಗುತ್ತದೆ ಎಂಬುದೇ. ಇಂಟರ್ವ್ಯೂ ಸಮಯದಲ್ಲಿ ಮಾ ಈ ವಿಷಯದ ನಿಜವಾದ ಪ್ರತಿಕ್ರಿಯೆಗಳನ್ನು ಕಂಡುಕೊಳ್ಳಬಹುದಾದರೂ, ಇಂಟರ್ವ್ಯೂನಲ್ಲಿ ಸಾಮಾನ್ಯವಾಗಿ ಕೇಳಲಾಗುವ ಕೆಲವು ಪ್ರಶ್ನೆಗಳು ಇ. ನೀವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಅಭ್ಯಾಸ ಮಾಡುವಲ್ಲಿ, ನೀವು ಆತ್ಮವಿಶ್ವಾಸದಿಂದ ಉತ್ತರಿಸಲು ಸಾಧ್ಯವಾಗುತ್ತದೆ ಮತ್ತು ಬೇರೆ ಪ್ರಶ್ನೆಗಳಿಗೆ ಉತ್ತರಿಸಲು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತೀರಿ.

ಶಾಲೆ ಪೂರ್ಣಗೊಳಿಸಿದ ಬಳಿಕ ಉತ್ತಮ ಭವಿಷ್ಯಕ್ಕಾಗಿ ನೀವು ಪರಿಗಣಿಸಬಹುದಾದ ಲಾಭದಾಯಕ ಕ್ಷೇತ್ರಗಳು

IFFCOYuva ಉದ್ಯೋಗ ಪೋರ್ಟಲ್ ನಲ್ಲಿರುವ ವೆಬ್ ಮೆಟ್ರಿಕ್ಸ್ ಅನ್ನು ನೋಡಿದರೆ, ನಿಜವಾಗಲೂ ಜನರು ಲಾಭದಾಯಕ ಕ್ಷೇತ್ರಗಳೆಂದು ಪರಿಗಣಿಸಿರುವ ವಲಯಗಳಲ್ಲಿ ನೈಜ ಟ್ರೆಂಡ್ ಇರುವುದು ತಿಳಿದುಬರುತ್ತದೆ. ಈಗಷ್ಟೇ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿರುವಂಥ ವಿದ್ಯಾರ್ಥಿಗಳು, ಪ್ರತಿಫಲ ನೀಡುತ್ತವೆಂದು ಪರಿಗಣಿಸಲಾದ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಾದ್ದು ಮುಖ್ಯವಾಗುತ್ತದೆ.  ಈ ಮೂಲಕವಾಗಿ ಅವರು ತಮ್ಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಹೇಗಿಡಬೇಕು ಎಂಬ ಬಗ್ಗೆ ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.

ಉದ್ಯೋಗಗಳನ್ನು ಹುಡುಕಿ